Sumanasa Kodavoor

Waa Taaj

ವ್ಯವಸ್ಥೆಗೆ ಹಿಡಿದ ಕನ್ನಡಿ ‘ವಾಹ್ ತಾಜ್’

ದೇಶದಲ್ಲಿ ಪರಿಹಾರವಾಗದ ಸಮಸ್ಯೆಗಳಲ್ಲಿ ಭ್ರಷ್ಟ ವ್ಯವಸ್ಥೆಯೂ ಒಂದು. ಎಲ್ಲ ರಂಗಗಳನ್ನೂ ಆವರಿಸಿಕೊಂಡಿರುವ ಭ್ರಷ್ಟತೆಯು ಆಡಳಿತ ವ್ಯವಸ್ಥೆಗೆ ಹೆಚ್ಚು ಅಮರಿಕೊಂಡಿದೆ. ಹಾಗಾಗಿಯೇ ಅಧಿಕಾರ ಇರುವುದೇ ಹಣ ಮಾಡಲು ಎಂಬ ಅಭಿಪ್ರಾಯ ಸಾರ್ವತ್ರಿಕಗೊಂಡಿದೆ. ಇಂಥ ವ್ಯವಸ್ಥೆಗೆ ಕನ್ನಡಿ ಹಿಡಿಯುವ ನಾಟಕವೇ ‘ವಾಹ್ ತಾಜ್”,
ಆಧುನಿಕ ಪ್ರಭುತ್ವದ ಅಧಿಕಾರಶಾಹಿಗಳು ಬೆರಳು ನೀಡಿದರೆ ಕೈಯನ್ನೇ ನುಂಗಿ ಬಿಡುತ್ತವೆ ಎಂಬುದನ್ನು ಶಹಜಹಾನ್ ಎಂಬ ಐತಿಹಾಸಿಕ ಪಾತ್ರವನ್ನು ಇಟ್ಟುಕೊಂಡು ಉಳಿದೆಲ್ಲ ಸಮಕಾಲೀನ ಪಾತ್ರಗಳನ್ನೊಳಗೊಂಡ ಕಟ್ಟಿಕೊಡುವ ಗಟ್ಟಿ ನಾಟಕ.
ಅಜಯ್ ಶುಕ್ಲಾ ಅವರು ಹಿಂದಿಯಲ್ಲಿ ರಚಿಸಿದ ‘ತಾಜ್ ಮಹಲ್ ಕಾ ಟೆಂಡರ್’ ನಾಟಕವನ್ನು ‘ವಾಹ್ ತಾಜ್” ಎಂದು ಕನ್ನಡಕ್ಕೆ ಎಂ.ಸಿ.ಆನಂದ್ ಅವರು ಸಮರ್ಥವಾಗಿ ಅನುವಾದಿಸಿದ್ದಾರೆ.
ತಾಜ್‌ಮಹಲ್ ಅನ್ನು ಕಟ್ಟಿಸಿರುವ ಶಹಜಹಾನ್ ಒಂದು ವೇಳೆ ಆಗ ಕಟ್ಟಿಸುವ ಬದಲು ಈಗ ಕಟ್ಟಿಸಲು ಹೊರಟಿದ್ದರೆ ಹೇಗಿರಬಹುದು ಎಂಬ ಕಲ್ಪನೆಯಲ್ಲಿ ಈ ನಾಟಕ ರಚನೆಗೊಂಡಿದೆ. ಅಧಿಕಾರಶಾಹಿಗಳ ಕೈಗೆ ಸಿಲುಕಿ ಶಹಜಾಹನ್‌ನಂಥ ದೊರೆಯೇ ಕಂಗೆಟ್ಟು ಹೋಗುವ, ತಾಜ್ ಮಹಲ್ ಅನ್ನು ಕಟ್ಟುವ ಕನಸು ಈಡೇರಿಸಲಾರದೇ ಒದ್ದಾಡುವ, ಅದೇ ಹೊತ್ತಿಗೆ ಅಧಿಕಾರಿಗಳು, ಗುತ್ತಿಗೆದಾರರು ಪೊಗದಸ್ತಾಗಿ ಬೆಳೆಯುವ ಸನ್ನಿವೇಶಗಳು ವಾಸ್ತವವನ್ನು ಕಟ್ಟಿಕೊಡುತ್ತವೆ. ಹೋರಾಟದ ಚಳವಳಿ ಗಳ ಹೆಸರಲ್ಲಿ ಯಾರ್ಯಾರು ಹೇಗೇಗೆ ದುಡ್ಡು ಮಾಡಿಕೊಳ್ಳುತ್ತಾರೆ ಎಂಬುದನ್ನು ಕೂಡಾ ‘ವಾಹ್ ತಾಜ್’ ಅನಾವರಣಗೊಳಿಸುತ್ತದೆ.
ಇಲ್ಲಿ ವಿರಹವೇದನೆಯಿಂದ ಬಳಲುವ ಉತ್ಕಟ ಪ್ರೇಮಿಯೂ ಇದ್ದಾನೆ. ಅದಕ್ಕಾಗಿ ಖಜಾನೆಯನ್ನೇ ಖಾಲಿ ಮಾಡಿಕೊಳ್ಳುವ ದುಂದುವೆಚ್ಚದ ಕನಸುಗಾರನೂ ಇದ್ದಾನೆ. ಆ ಕನಸಿನ ಹೆಸರಲ್ಲಿ ತಾಜ್ ಮಹಲ್ ಕಟ್ಟುವ ಬದಲು ತಮಗೆ ಬೇಕಾದ ಮಹಲ್ ಕಟ್ಟುವವರೂ ಇದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರ ಎಂದರೆ ಏನು ಎಂಬುದಕ್ಕೆ ಈ ನಾಟಕ ಉತ್ತರ ನೀಡುತ್ತದೆ.
‘ವಾಹ್ ತಾಜ್’ ಪದಗಳಲ್ಲಿ ವಿವರಿಸುವ ಕಥೆಯಲ್ಲ. ನೋಡಿದರಷ್ಟೇ ದಕ್ಕುವ ವಾಸ್ತವ.

Waa Taaj

Play Details

Duration 120 Min
Language Kannada
Hindi Origin Taaj Mahal Ka Tender
Hindi Writer Ajay Shukla
Writer M.C Anand
Direction Diwakar Kateel

Shows Last Updated 01/02/2023

Sl. No Place Date
1
Rangabhoomi Kannada Natakaottsava - Manipal
21/12/2021
2
Sumanasa Rangahabba - Manipal
22/03/2022
0 +

Shows

0 +

Productions

0 +

Awards

0 +

Years