Sumanasa Kodavoor

Arundati Aalapa

ಹೆಣ್ಣಂತರಂಗದೀ ಅರುಂಧತಿ ಆಲಾಪ

ಅರುಂಧತಿ ಆಲಾಪ ಹೆಣ್ಣೂಬ್ಬಳ ಒಳಗನ್ನು ಕಥಿಸುವ ನಾಟಕ. ಗಂಡ ಮತ್ತು ಮಗನ ನಡುವೆ ಇಬ್ಬರಿಗೂ ಸಲ್ಲದವಳಾಗಿ ತನ್ನತನದ ಹುಡುಕಾಟದಲ್ಲಿರುವ ಸ್ತ್ರೀಯೊಬ್ಬಳ ತೊಳಲಾಟಗಳೇ ಈ ಆಲಾಪ, ಗಂಡನಿಂದ ಅಗೌರವಕ್ಕೊಳಗಾದ ಹೆಣ್ಣಿಗೆ ಮಗನಿಂದಲೂ ಗೌರವ ಸಲ್ಲದಾಗ ಮಾತೃತ್ವ ಮತ್ತು ಪತ್ನಿತ್ವಗಳಾಚೆಗೆ ಯೋಚಿಸುವ ಆಕೆ ಹೆಣ್ಣಾಗುವ ಮೊದಲ ಹಂತದಲ್ಲಿ ನಿಂತು ತನ್ನನ್ನು ಕಂಡುಕೊಳ್ಳುವ ಆಲೋಚನೆಯಲ್ಲಿದ್ದಾಳೆ. ತಾನು ಕಳಕೊಂಡ ಹರೆಯದ ಕ್ಷಣಗಳನ್ನು ಮತ್ತೊಮ್ಮೆ ಕಟ್ಟಿಲೊಳ್ಳುವ ಸನ್ನಾಹದಲ್ಲಿದ್ದಾಳೆ. ಪ್ರೀತಿಯಿಂದ ವಂಚಿತಳಾದ ಆಕೆಗೆ ಹರೆಯದ ಹೆಣ್ಣುಗಳೊಳಗೆ ಉದ್ಭವಿಸುವ ಆ ಚಂಚಲತೆ, ಆಕರ್ಷಣೆ ಪ್ರೀತಿಯ ಖಗೆಗೆ ತೀವ್ರ ಕೌತುಕವಿದೆ. ಕುಣಿಯುವ ವಯಸ್ಸಲ್ಲಿ, ಹಾಡಬೇಕಾದ ಸಂದರ್ಭಗಳಲ್ಲಿ ಅವಕಾಶ ಹೀನಳಾಗಿ ಅನಿವಾರ್ಯತೆಗೆ ಒಗ್ಗಿಕೊಂಡು ಖದುಕಿದ ಆಕೆ, ತಾನು ಕಳಕೊಂಡವುಗಳ ಹುಡುಕಾಟದಲ್ಲಿ ತನ್ನಿರವು ಮರೆಯುವ ಮೂಲಕ ಸ್ವಾತಂತ್ರ್ಯ ಹೀನರಾಗಿ ತಮ್ಮತನ ಮರೆತ, ಪ್ರೀತಿಯಿಂದ ವಂಚಿತರಾದ ಹೆಣ್ಣುಮಕ್ಕಳ ಪ್ರತಿನಿಧಿಯಂತೆ ಭಾಸವಾಗುತ್ತಾಳೆ.
ಮಗನೊಂದಿಗೆ ಓಡಿ ಹೋದ ಕನಕ, ಅರುಂಧತಿಯೊಳಗಿನ ಹರೆಯದ ಉತ್ಸಾಹವಾಗಿ ಕಂಡರೆ, ಕ್ಷಣದ ಆಕರ್ಷಣೆಗೆ ಖಲಿಯಾಗಿ ಸ್ವಾತಂತ್ರ್ಯ ಮತ್ತು ಸ್ವೇಚ್ಛೆಗಳ ನಡುವಿನ ಗೆರೆ ಮರೆತ ಹೆಣ್ಣಾಗಿ ಕಾಣಿಸಿಕೊಳ್ಳುವ ಕನಕ ಆಧುನಿಕ ಕಾಲಘಟ್ಟದ ಹೆಣ್ಣು ಮಕ್ಕಳೊಳಗೂ ಇರುವ ಅಸಹಾಯಕತೆಗೆ ಹಿಡಿದ ಕನ್ನಡಿ.
ಹೆತ್ತವರ ಅತಿ ಸಲಿಗೆ, ಅತಿ ಮೋಹ, ತಾಯಿಯ ಅಸಹಾಯಕತೆ, ಸುಖದ ಹುಡುಕಾಟ, ದುಶ್ಚಟಗಳು ಮನುಷ್ಯನನ್ನು ಎಷ್ಟು ಅಧೋಪತನಕ್ಕೆಳೆಯುತ್ತದೆ ಎಂಬುದು ಇಲ್ಲಿ ಸೊಗಸಾಗಿ ವ್ಯಕ್ತವಾಗಿದ್ದು, ಗಂಡಿನ ಸುಖ-ಲೋಲುಪತೆ, ಅಸಮರ್ಥತೆ ಹೆಣ್ಣನ್ನು ಎಷ್ಟರ ಮಟ್ಟಿಗೆ ಖಳಲಿಸುತ್ತದೆ ಎಂಬುದರ ಚಿತ್ರಣವಿದೆ.
ಪ್ರಕೃತಿ ಸಹಖವಾದ ಸ್ತ್ರೀ ಸಂವೇದನೆಯ ಪದರಗಳನ್ನು ಎಳೆ ಎಳೆಯಾಗಿ ಸಮಾಜಕ್ಕೆ ದಾಟಿಸುವ ಪ್ರಯತ್ನ ಈ ನಾಟಕದಲ್ಲಿದ್ದು ವಯಸ್ಸಿನ ಹಂಗಿರದ ಹೆಣ್ತನ, ಸಣ್ಣ – ಸಣ್ಣ ಆಸೆಗಳು ಗಂಡು ಹೃದಯಕ್ಕೆ ಅರ್ಥವಾಗಬೇಕೆಂಬ ಆಶಯವಿದೆ.
ಎಲ್ಲಾ ಸಂಬಂಧ, ಜವಾಬ್ದಾರಿಗಳ ಆಚೆಗೂ ಇರುವ ಸ್ತ್ರೀ ಹೃದಯದ ಸಹಜ ಕನಸುಗಳೇ ಈ ಅರುಂಧತಿ ಅಲಾಪ.

 

Arundati Aalapa

Play Details

Duration 90 Min
Language Kannada
Writer Ramanath Mysore
Direction Nithish Bantwala

Shows Last Updated 01/02/2023

Sl. No Place Date
1
Rangabhoomi Kannada Natakotsava Manipal
01/12/2022
0 +

Shows

0 +

Productions

0 +

Awards

0 +

Years