Sumanasa Kodavoor

ತುಳು ಸಾಮಾಜಿಕ ಹಾಸ್ಯಮಯ ನಾಟಕ “ಶಿಕಾರಿ” ಪೋಸ್ಟರ್ ಬಿಡುಗಡೆ

ತುಳು ಸಾಮಾಜಿಕ ಹಾಸ್ಯಮಯ ನಾಟಕ “ಶಿಕಾರಿ” ಪೋಸ್ಟರ್ ಬಿಡುಗಡೆ

ತುಳು ರಂಗಭೂಮಿ ಸದಾ ಹೊಸತನವನ್ನು ಬಯಸುತ್ತದೆ. ಇದಕ್ಕೆ ಪೂರಕವಾಗಿ ಸುಮನಸಾ ಕೊಡವೂರು ಸಜ್ಜುಗೊಂಡಿದ್ದು ಈ ವರ್ಷದ ಬಹು ನಿರೀಕ್ಷೆಯ ನಾಟಕವಾಗಿ ಶಿಕಾರಿ ರಂಗರೂಪಗೊಂಡಿದೆ. ಶಿಕಾರಿಯ ರೂವಾರಿಗಳು ಸಾಕಷ್ಟು ಪೂರ್ವ ತಯಾರಿಗೆ ಮಹತ್ವ ನೀಡಿದ್ದು ಒಂದಷ್ಟು ಕಾತರಗಳಿಗೆ ಭರವಸೆಯ ಪ್ರಯತ್ನವನ್ನು ಮಾಡಿದ್ದಾರೆ.ತುಳು ರಂಗಭೂಮಿಯ ಇತಿಹಾಸದಲ್ಲಿ ಅವಿಸ್ಮರಣೀಯ ಎಂಬಂತೆ ಏಳು ಬಾರಿ ದಿ.ರತ್ನವರ್ಮ ಹೆಗ್ಗಡೆ ಪ್ರಥಮ ಪ್ರಶಸ್ತಿಯನ್ನು ನಾಟಕ ಕೃತಿ ರಚನೆಗೆ ಸ್ವೀಕರಿಸಿರುವ ಜಿಲ್ಲಾ ರಾಜ್ಯೋತ್ಸವ ಗೌರವಾಂಕಿತ ‘ರಂಗದ ರವಿ’ ರವಿಕುಮಾರ್ ಕಡೆಕಾರ್ ರಚನೆಯ ಶಿಕಾರಿಗೆ ಬಹುಮುಖ ರಂಗತಾರೆ,ಸೃಜನಶೀಲ ಸಾಂಸ್ಕೃತಿಕ ಸಿರಿ ವಿದ್ದು ಉಚ್ಚಿಲ್ ದಕ್ಷ ನಿರ್ದೇಶನ ನೀಡಿದ್ದಾರೆ.ಉದಯೋನ್ಮುಖ ಸಂಗೀತ ಪ್ರತಿಭೆ ಆಕಾಶ್ ಹೆಬ್ಬಾರ್ ಸಂಗೀತ ಸಂಯೋಜನೆಗೆ,ನಿತಿನ್ ಪೆರಂಪಳ್ಳಿ ಬೆಳಕಿನ ವಿನ್ಯಾಸವಿದೆ.
ಸುಮನಸಾ ನೂತನ ತುಳು ಸಾಮಾಜಿಕ ಹಾಸ್ಯಮಯ ನಾಟಕ “ಶಿಕಾರಿ” ಪೋಸ್ಟರ್ ಸಿನಿ ಕಲಾವಿದ,ನಿರ್ಮಾಪಕ,ನಿರ್ದೇಶಕ ಸುರ್ಯೋದಯ್ ಪೆರಂಪಳ್ಳಿ ಬಿಡುಗಡೆಗೊಳಿಸಿದರು, ವೀನಸ್ ಇಂಟರ್ನ್ಯಾಷನಲ್ ಪ್ರವರ್ತಕ ಹರೀಶ್ ಎಂ ಕೆ,’ರಂಗದ ರವಿ’ ರವಿ ಕುಮಾರ್ ಕಡೆಕಾರ್, ನಿರ್ದೇಶಕ ವಿದ್ದು ಉಚ್ಚಿಲ್, ಸುಮನಸಾ ಅಧ್ಯಕ್ಷರಾದ ಪ್ರಕಾಶ್ ಜಿ ಕೊಡವೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದಯಾನಂದ್ ಕರ್ಕೇರ ಉಗ್ಗೆಲ್ಬೆಟ್ಟು ನಿರೂಪಿಸಿದರು.